ಸಮೃದ್ಧಿ ಯೋಜನೆ

ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಮುದಾಯದ ಯುವಕ/ಯುವತಿಯರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಮಹತ್ವಾಕಾಂಕ್ಷೆಯೊಂದಿಗೆ ದೇಶದಲ್ಲಿಯೇ ಬೃಹತ್ ಉದ್ಯಮಶೀಲತೆ ಸಾಧಿಸುವ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿಷ್ಠಿತ ಬ್ರಾಂಡೆಡ್ ಕಂಪೆನಿಗಳು ಹಾಗೂ ಕಾರ್ಪೋರೆಟ್ ಉದ್ದಿಮೆಗಳ ಸಹಭಾಗಿತ್ವದಲ್ಲಿ ಕೈಗಾರಿಕಾ ತರಬೇತಿ, ವ್ಯಕ್ತಿತ್ವ ವಿಕಸನ, ಸಂವಹನ ತರಬೇತಿ. ಚಿಲ್ಲರೆ ಮಳಿಗೆಗಳ ನಿರ್ವಹಣೆ, ತೆರಿಗೆ ನೀತಿ ಮತ್ತು ಜಿ.ಎಸ್.ಟಿ, ದಾಸ್ತಾನು ನಿರ್ವಹಣೆಗಳ ಬಗ್ಗೆ ತರಬೇತಿ ನೀಡಲಿದೆ. ಸರ್ಕಾರವು ಮುಂದಿನ 3 ವರ್ಷದಲ್ಲಿ 2000 ಕೋಟಿ ರೂ ವೆಚ್ಚದಲ್ಲಿ ಗ್ರಾಮೀಣ ಪ್ರದೇಶ, ಎರಡನೇ ಹಾಗೂ ಮೂರನೇ ಶ್ರೇಣಿಯ ನಗರಗಳಲ್ಲಿ 25000 ಸ್ವಯಂ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ.

ಯಾಕೆ ಸಮೃದ್ಧಿ?

image

ರಾಜ್ಯದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಜನರ ಆರ್ಥಿಕ ಸಬಲೀಕರಣಕ್ಕಾಗಿ

image

ಕೌಶಲ್ಯ ಅಭಿವೃದ್ಧಿಯ ಜೊತೆಗೆ ಹೆಚ್ಚಲಿರುವ ಉದ್ಯಮಶೀಲತೆ

image

ರಾಜ್ಯದ ಕೌಶಲ್ಯಯುಕ್ತ ಮಾನವ ಸಂಪನ್ಮೂಲ ಗಣತಿಯ ವರದಿ ಪ್ರಕಾರ 3.1ಲಕ್ಷ ಕೈಗಾರಿಕಾ ಮಾನವ ಸಂಪನ್ಮೂಲ ಸರಬರಾಜು ಅಂತರ

image

ರಾಜ್ಯದ ಜನಸಂಖ್ಯೆಯ ಶೇ. 24 ರಷ್ಟು ಭಾಗ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಜನರು ಇದ್ದಾರೆ

image

ದೇಶದಲ್ಲಿಯೇ ಅತಿ ಹೆಚ್ಚು ಸ್ವಯಂ ಉದ್ಯೋಗವನ್ನು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಜನರಿಗೆ ಕಲ್ಪಿಸಲು

ಪ್ರಭಾವ

ಪ್ರತಿಷ್ಠಿತ ಖಾಸಗಿ ಸಂಸ್ಥೆಗಳು, ಕಾರ್ಪೊರೇಟ್ ಉದ್ಯಮಿಗಳು ಹಾಗೂ ರಿಟೇಲ್ ಉದ್ಯಮಿಗಳ ಸಹಭಾಗಿತ್ವದಲ್ಲಿ ವ್ಯಕ್ತಿತ್ವ ವಿಕಸನ,ಸಂವಹನ ಹಾಗೂ ಸೂಕ್ತ ಕೌಶಲ್ಯ ತರಬೇತಿ ನೀಡುವುದರೊಂದಿಗೆ ಸ್ವಂತ ಉದ್ಯಮ ಹಾಗೂ ಹೆಚ್ಚುವರಿ ಆದಾಯದ ಮೂಲಕ ಉತ್ತಮ ಜೀವನ ರೂಪಿಸಲು ನೆರವು

image

25000 ಸ್ವಯಂ ಉದ್ಯೋಗ ಅವಕಾಶಗಳು

image

ರೂ 10ಲಕ್ಷದ ವರೆಗೂ ಧನಸಹಾಯ

image

ಬಡತನ ನಿರ್ಮೂಲನೆಗಾಗಿ ಮೊದಲನೆಯ ಹಂತದಲ್ಲಿ 700 ಕೋಟಿ ರೂ ವೆಚ್ಚದಲ್ಲಿ ಸಮೃದ್ಧಿ ಯೋಜನೆ

image

ನೌಕರರಿಂದ ಮಾಲೀಕರಾಗಲು

image

ಕೈಗಾರಿಕಾ ಸಂಸ್ಥೆ ಗಳ ಸಹಭಾಗಿತ್ವದಲ್ಲಿ

ಫಲಾನುಭವಿಗಳ ಅನುಕೂಲತೆಗಳು

  • ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸೂಕ್ತ ವೇದಿಕೆ.
  • ಆಯ್ಕೆಯಾದ ಫಲಾನುಭವಿಗಳಿಗೆ ತಾವು ಇಚ್ಚಿಸಿದ ಉದ್ಯಮದ ಚಟುವಟಿಕೆಗಳನ್ನು ಕೈಗೊಳ್ಳಲು 10 ಲಕ್ಷ ರೂ ವೆಚ್ಚದಲ್ಲಿ ತರಬೇತಿ ಮತ್ತು ಮೂಲಸೌಕರ್ಯ ವ್ಯವಸ್ಥೆ
  • ಶೋಷಿತ ವರ್ಗದ ಜನರನ್ನು ನಿರಂತರ ಮಾರ್ಗದರ್ಶನ ಹಾಗೂ ಬೆಂಬಲ ನೀಡಿ ಸ್ಥಿರ ಆದಾಯ ತರುವ ಸ್ವಂತ ಉದ್ಯಮಿಗಳನ್ನಾಗಿಸುವುದರ ಮೂಲಕ ಸಮಸಮಾಜದ ನಿರ್ಮಾಣ.
ಫಲಾನುಭವಿ ಗಳ ನೋಂದಾವಣೆ

ಫ್ರಾಂಚೈಸರ್ಸ್ ಗಳಿಗೆ ದೊರೆಯುವ ಸೌಲಭ್ಯಗಳು

  • ಯಾವುದೇ ಬಂಡವಾಳವಿಲ್ಲದೆ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಲು ಹಾಗೂ ಹೆಚ್ಚು ಗ್ರಾಹಕರನ್ನು ಗಳಿಸಲು ಸೂಕ್ತ ವೇದಿಕೆ
  • ಫ್ರಾಂಚೈಸಿ / ಡೀಲರ್ ಷಿಪ್ ನ ಮೂಲಕ ಮಾರ್ಕೆಟ್ ನ ಷೇರಿನಲ್ಲಿ ಹೆಚ್ಚಳ
  • ಎರಡನೆಯ ಹಾಗೂ ಮೂರನೆಯ ಶ್ರೇಣಿಯ ನಗರಗಳಲ್ಲಿ ಅರ್ಹ ಉದ್ಯಮಿಗಳನ್ನು ಗುರುತಿಸಲು ಅವಕಾಶ .ಇದರಿಂದ ಮುಂದಿನ ದಿನಗಳಲ್ಲಿ ಸಮಯ ಹಾಗೂ ಹಣದ ಉಳಿತಾಯ